Facebook
Twitter
You tube
ವಿಟ್ಲ: ದಾರಿ ವಿಚಾರ ,ಮಾರಣಾಂತಿಕ ಹಲ್ಲೆ
Manjeshwarvartha.com
ವಿಟ್ಲ: ದಾರಿ ವಿಚಾರವಾಗಿ ಪಿಕಪ್ ಚಾಲ ಕನೊಬ್ಬನಿಗೆ ಮೂವರು ಸಹೋದರರ ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಕೊಳ್ನಾಡು ಗ್ರಾಮದ ಕೋಡಪದವು ತಾಳಿ ತ್ತನೂಜಿ ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ಕೊಳ್ನಾಡು ಗ್ರಾಮದ ತಾಳಿತ್ತನೂಜಿ ನಿವಾಸಿ ಬಾಬು ಸಫಲ್ಯ ಅವರ ಪುತ್ರ ಕೂಸಪ್ಪ ಸಫಲ್ಯ ಎಂಬವರೇ ಹಲ್ಲೆಗೊಳಗಾಗಿದ್ದು, ವಿಟ್ಲದ ಸಮುದಾಯ ಆಸ್ಪತ್ರೆಗೆ ದಾಖಲಾ ಗಿದ್ದಾರೆ.
ಪಿಕಪ್ ಚಾಲಕರಾಗಿರುವ ಇವರು ಭಾನುವಾರ ಬೆಳಿಗ್ಗೆ ತನ್ನ ಮನೆ ಕಡೆಯಿಂದ ವಿಟ್ಲ ಕಡೆ ಬಾಡಿಗೆಗೆಂದು ತೆರಳುತ್ತಿರುವ ವೇಳೆ ಅವರ ನೆರೆಮನೆ ನಿವಾಸಿಗಳಾದ ಕೃಷ್ಣಪ್ಪ ಗೌಡ ಅವರ ಮಕ್ಕಳಾದ ಚಂದ್ರ, ಸುಧಾಕರ ಹಾಗೂ ಜಗದೀಶ ಎಂಬ ಮೂವರು ಸಹೋದರರು ಬೈಕಿನಲ್ಲಿ ಬಂದು ಅಡ್ಡಗಟ್ಟಿ ವಾಹನದಿಂದ ಎಳೆದು ಹಾಕಿ ಕಾಲಿನಿಂದ ತುಳಿದು ಗಂಭೀರ ವಾಗಿ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ದೂರಿದ್ದಾರೆ. ಗ್ರಾ. ಪಂ ದಾರಿಯಲ್ಲಿ ಇವರು ವಾಹನ ಚಲಾಯಿಸಿಕೊಂಡು ವಿಟ್ಲ ಪೇಟೆ ಕಡೆ ತೆರಳುತ್ತಿದ್ದ ಸಂದರ್ಭ ‘ಈ ರಸ್ತೆಯಲ್ಲಿ ನೀನು ಹೋಗಬಾರದು’ ಎಂದು ಹೇಳಿ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ದೂರಿದ್ದಾರೆ. ಕೆಲ ಸಮಯಗಳ ಹಿಂದೆ ಹಣದ ವಿಚಾರ ವಾಗಿ ಈ ತಂಡ ಇವರಿಗೆ ಹಲ್ಲೆ ನಡೆಸಿದೆ ಬಳಿಕ ವಿಟ್ಲ ಠಾಣೆಯಲ್ಲಿ ರಾಜಿ ಸಂಧಾನ ನಡೆದಿತ್ತು. ಇದೀಗ ಬಳಿಕ ಈ ಸಹೋದರರು ತಮ್ಮ ಅಟ್ಟಹಾಸ ಮೆರೆದಿದ್ದಾರೆ ಎಂದು ಗಾಯಾಳು ಆರೋಪಿಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post Your Comments
Send Your Comments  
Name Email Id
Location  
Comments